Karnataka SSLC Maths Model Question Paper 4 Kannada Medium

Karnataka SSLC Maths Model Question Paper 4 Kannada Medium is part of Karnataka SSLC Maths Model Question Papers. Here we have given Karnataka SSLC Maths Model Question Paper 4 Kannada Medium.

Board KSEEB, Karnataka Board
Textbook KTBS, Karnataka
Class SSLC Class 10
Subject Maths
Paper Set Model Paper 4
Category Karnataka Board Model Papers

Karnataka SSLC Maths Model Question Paper 4 Kannada Medium

ವಿಷಯ : ಗಣಿತ
ಸಮಯ: 3 ಗಂಟೆಗಳು
ಗರಿಷ್ಠ ಅಂಕಗಳು: 80

I. ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲಾಗಿದೆ. ಇವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಡನೆ ಪೂರ್ಣ ಉತ್ತರವನ್ನು ಬರೆಯಿರಿ. (8 × 1 = 8)

Question 1.
ಕೆಳಗಿನ ಸಂಖ್ಯೆಗಳ ಗಣಗಳಲ್ಲಿ ಸಮರೂಪ ತ್ರಿಭುಜಗಳಾಗುವಂತಹ ಜೋಡಿಯು
(A) (3, 4, 6) (9, 12, 24)
(B) (3, 4, 6) (9, 12, 18)
(C) (2,4, 6) (2,3, 14)
(D) (5, 10, 15) (10, 30, 45)

Question 2.
ಚತುರ್ಥಕದ ವಿಸ್ತೀರ್ಣವನ್ನು ಕಂಡುಹಿಡಿಯುವ ಸೂತ್ರ
(A) πr2
(B) \(\frac { 1 }{ 2 }\) πr2
(C) \(\frac { 1 }{ 3 }\) πr2
(D) \(\frac { 1 }{ 4 }\) πr2

Question 3.
(2, 3) ಮತ್ತು (4, 5) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು
(A) (3, 4)
(B) (4, 5)
(C) (5, 6)
(D) (6, 7)

Question 4.
ಧನ ಪೂಣಾಂಕ ‘a’ ಅನ್ನು ಪೂಣಾಂಕ ‘b’ ನಿಂದ ಭಾಗಿಸಿದಾಗ ಅನನ್ಯ ಪೂರ್ಣಾಂಕಗಳಾದ ‘q’ ಮತ್ತು ‘r’ ಗಳು ಇರುತ್ತವೆ. ಇದಕ್ಕೆ ಸರಿಹೊಂದುವ ಹೇಳಿಕೆ.
(A) b = a × q + r
(B) q = a × b + r
(C) a = b × q – r
(D) a = b × q + r

Question 5.
tan260° ಯ ಬೆಲೆ
(A) \(\frac { 1 }{ 3 }\)
(B) \(\frac { 1 }{ \surd 3 }\)
(C) 3
(D) √3

Question 6.
m ನ ಯಾವ ಧನಾತ್ಮಕ ಬೆಲೆಗೆ 3x2 + ka + 3 = 0 ಸಮೀಕರಣದ ಮೂಲಗಳು ಸಮವಾಗಿರುತ್ತವೆ.
(A) 2
(B) 3
(C) 5
(D) 6

Question 7.
ಒಂದು ಪ್ರಯೋಗದ ಎಲ್ಲಾ ಪ್ರಾಥಮಿಕ ಘಟನೆಗಳ ಸಂಭವನೀಯತೆಗಳ ಮೊತ್ತವು
(A) 0
(B) 1
(C) 2
(D) 3

Question 8.
ಒಂದು ಸಿಲಿಂಡರ್‌ನ ಪಾದದ ವಿಸ್ತೀರ್ಣ 24 cm2 ಮತ್ತು ಎತ್ತರ 10 cm ಆದರೆ ಸಿಲಿಂಡರ್‌ನ ಘನಫಲ
(A) 24 cm3
(B) 48 cm3
(C) 240 cm3
(D) 480 cm3

II. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ: (6 × 1 = 6)

Question 9.
ಥೇಲ್ಸ್‌ನ ಪ್ರಮೇಯವನ್ನು ನಿರೂಪಿಸಿ,

Question 10.
135 ಮತ್ತು 225 ರ ಮ.ಸಾ.ಅ. ವನ್ನು ಕಂಡುಹಿಡಿಯಿರಿ.

Question 11.
ಬಹುಪದೋಕ್ತಿ x2 – 3x +5 ರ ಶೂನ್ಯತೆಗಳ ಮೊತ್ತವನ್ನು ಕಂಡುಹಿಡಿಯಿರಿ.

Question 12.
ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆದ ಸ್ಪರ್ಶಕದ ಉದ್ದವು 8 cm ಮತ್ತು ವೃತ್ತಕೇಂದ್ರ ಹಾಗು ಬಾಹ್ಯಬಿಂದುವಿನ ದೂರ 10 cm ಆದರೆ ವೃತ್ತದ ತ್ರಿಜ್ಯವೆಷ್ಟು?

Question 13.
sin A = \(\frac { 3 }{ 4 }\) ಆದರೆ cosec A ನ ಬೆಲೆಯೇನು?

Question 14.
ಹಂತ ವಿಚಲನಾ ವಿಧಾನದಿಂದ ಸರಾಸರಿಯನ್ನು ಕಂಡುಹಿಡಿಯುವ ಸೂತ್ರವನ್ನು ಬರೆಯಿರಿ.

III. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ: (16 × 2 = 32)

Question 15.
ವಾರ್ಷಿಕ ಸಂಬಳ ₹ 5000 ಮತ್ತು ಪ್ರತಿವರ್ಷಕ್ಕೆ ಹೆಚ್ಚುವರಿ ಬತ್ಯ ₹ 200 ಇರುವ ಕೆಲಸಕ್ಕೆ ಸುಬ್ಬರಾವ್ 1995 ರಲ್ಲಿ ಸೇರಿದರು. ಯಾವ ವರ್ಷದಲ್ಲಿ ಅವರ ಸಂಬಳ ₹ 7000 ಆಗುತ್ತದೆ?

Question 16.
ಚಿತ್ರದಲ್ಲಿ LM || CB ಮತ್ತು LN || CD ಆದರೆ \(\frac { AM }{ AB }\) = \(\frac { AN }{ AD }\) ಎಂದು ಸಾಧಿಸಿ.
Karnataka SSLC Maths Model Question Paper 4 Kannada Medium 1

Question 17.
ಈ ಜೋಡಿ ಸಮೀಕರಣಗಳನ್ನು ವರ್ಜಿಸುವ ವಿಧಾನದಿಂದ ಬಿಡಿಸಿ, 3x + 4y = 10 & 2x – 2y = 2.

Question 18.
ಕೆಳಗಿನ ರೇಖಾತ್ಮಕ ಸಮೀಕರಣಗಳ ಜೋಡಿಗಳು ಪ್ರತಿನಿಧಿಸುವ ಸರಳರೇಖೆಗಳು ಒಂದು ಬಿಂದುವಿನಲ್ಲಿ ಛೇದಿಸುತ್ತವೆಯೇ? ಸಮಾಂತರವಾಗಿವೆಯೆ? ಅಥವಾ ಐಕ್ಯಗೊಂಡಿವೆಯೆ? ಕಂಡುಹಿಡಿಯಿರಿ
9x + 3y + 12 = 0; 18x + 6y + 24 = 0.

Question 19.
ಪರಧಿಯು 22 cm ಇರುವ ಒಂದು ಅರ್ಧ ವೃತ್ತದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.

Question 20.
4 cm ಮತ್ತು 6 cm ತ್ರಿಜ್ಯಗಳಿರುವ ಏಕಕೇಂದ್ರೀಯ ವೃತ್ತಗಳಿವೆ. 6 cm ತ್ರಿಜ್ಯದ ವೃತ್ತದ ಮೇಲಿನ ಒಂದು ಬಿಂದುವಿನಿಂದ 4 cm ತ್ರಿಜ್ಯದ ವೃತ್ತಕ್ಕೆ ಸ್ಪರ್ಶಕವನ್ನು ರಚಿಸಿ.

Question 21.
(2, -5) ಮತ್ತು (-2, 9) ರಿಂದ ಸಮಾನ ದೂರದಲ್ಲಿರುವ x-ಅಕ್ಷದ ಮೇಲಿನ ಬಿಂದುವನ್ನು ಕಂಡುಹಿಡಿಯಿರಿ.

Question 22.
ಶೃಂಗಬಿಂದುಗಳು (1, -3), (4, 1) ಮತ್ತು (2, 3) ಆಗಿರುವ ತ್ರಿಭುಜದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.

Question 23.
ಶೂನ್ಯತೆಗಳ ಮೊತ್ತ \(\frac { -1 }{ 4 }\) ಮತ್ತು ಗುಣಲಬ್ಧ \(\frac { 1 }{ 4 }\) ಆಗಿರುವ ಒಂದು ವರ್ಗ ಬಹುಪದೋಕ್ತಿಯನ್ನು ಕಂಡುಹಿಡಿಯಿರಿ.

Question 24.
x2 + 6x – 7 = 0 ಸಮೀಕರಣವನ್ನು ವರ್ಗಪೂರ್ಣಗೊಳಿಸುವ ವಿಧಾನದಿಂದ ಬಿಡಿಸಿ.

Question 25.
ಗೋಪುರದ ಪಾದದಿಂದ 30m ದೂರದ ನೆಲದ ಮೇಲಿನ ಒಂದು ಬಿಂದುವಿನಿಂದ, ಗೋಪುರದ ತುದಿಯನ್ನು ನೋಡಿದಾಗ ಉಂಟಾಗುವ ಉನ್ನತ ಕೋನವು 30° ಆದರೆ, ಗೋಪುರದ ಎತ್ತರವನ್ನು ಕಂಡುಹಿಡಿಯಿರಿ.

Question 26.
ಒಂದು ಕಟ್ಟಡದ ಮೇಲಿನಿಂದ ಹಾಗೂ ಕೆಳಗಿನಿಂದ ಬೆಟ್ಟದ ತುದಿಯನ್ನು ಗಮನಿಸಿದಾಗ ಉಂಟಾದ ಉನ್ನತ ಕೋನವು 45° ಮತ್ತು 60° ಆಗಿದೆ. ಕಟ್ಟಡದ ಎತ್ತರ 24 m ಆದರೆ ಬೆಟ್ಟದ ಎತ್ತರವೇನು?

Question 27.
ಈ ಕೆಳಗಿನ ದತ್ತಾಂಶಗಳಿಗೆ ಸರಾಸರಿಯನ್ನು ಕಂಡುಹಿಡಿಯಿರಿ.
Karnataka SSLC Maths Model Question Paper 4 Kannada Medium 2
ಅಥವಾ
ಈ ಕೆಳಗಿನ ದತ್ತಾಂಶಗಳಿಗೆ ಬಹುಲಕವನ್ನು ಕಂಡುಹಿಡಿಯಿರಿ.
Karnataka SSLC Maths Model Question Paper 4 Kannada Medium 3

Question 28.
ಒಂದು ಚೀಲದಲ್ಲಿ 3 ಕೆಂಪು ಚೆಂಡುಗಳು ಮತ್ತು 5 ಕಪ್ಪು ಚೆಂಡುಗಳಿವೆ. ಚೀಲದಿಂದ ಯಾದೃಚ್ಛಿಕವಾಗಿ ಒಂದು ಚೆಂಡನ್ನು ತೆಗೆಯಲಾಗಿದೆ. ತೆಗೆದ ಚಂಡು ಕೆಂಪು ಆಗಿರುವ ಸಂಭವನೀಯತೆ ಎಷ್ಟು?

Question 29.
64 cm3 ಘನಫಲವನ್ನು ಹೊಂದಿರುವ 2 ವರ್ಗ ಘನಗಳ ಮುಖಗಳನ್ನು ಸೇರಿಸಿ ಒಂದು ಆಯತ ಘನಾಕೃತಿ ಮಾಡಿದೆ. ಈ ಘನಾಕೃತಿಯ ಮೇಲೈ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
ಅಥವಾ
14 cm ಎತ್ತರವಿರುವ ಒಂದು ಕುಡಿಯುವ ನೀರಿನ ಗಾಜಿನ ಲೋಟವು ಶಂಕುವಿನ ಭಿನ್ನಕದ ರೂಪದಲ್ಲಿದೆ. ಅದರ ಎರಡು ವೃತ್ತಾಕಾರದ ಪಾದಗಳ ವ್ಯಾಸಗಳು 4 cm ಮತ್ತು 2 cm ಗಳಾಗಿವೆ. ಗಾಜಿನ ಲೋಟ ಸಾಮರ್ಥ್ಯವನ್ನು ಕಂಡುಹಿಡಿಯಿರಿ.

Question 30.
12 ಮತ್ತು 15 ರ ಲ.ಸಾ.ಅ. ಮತ್ತು ಮ.ಸಾ.ಅ. ವನ್ನು ಅವಿಭಾಜ್ಯ ಅಪವರ್ತನ ವಿಧಾನದಿಂದ ಕಂಡುಹಿಡಿಯಿರಿ.

IV. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ: (6 × 3 = 18)

Question 31.
ವೃತ್ತದ ಮೇಲಿನ ಯಾವುದೇ ಬಿಂದುವಿನಲ್ಲಿ ಎಳೆದ ಸ್ಪರ್ಶಕವು, ಸ್ಪರ್ಶ ಬಿಂದುವಿನಲ್ಲಿ ಎಳೆದ ತ್ರಿಜ್ಯಕ್ಕೆ ಲಂಬವಾಗಿರುತ್ತದೆ ಎಂದು ಸಾಧಿಸಿ.
ಅಥವಾ
ಒಂದು ಸಮಾಂತರ ಚತುರ್ಭುಜದಲ್ಲಿ ವೃತ್ತವು ಅಂತಸ್ಥವಾದಾಗ ಸಮಾಂತರ ಚತುರ್ಭುಜವು ವಜ್ರಾಕೃತಿಯಾಗುತ್ತದೆ ಎಂದು ಸಾಧಿಸಿ.

Question 32.
ಪಾದ 8 cm ಮತ್ತು ಎತ್ತರ 4 cm ಇರುವ ಒಂದು ಸಮದ್ವಿಬಾಹು ತ್ರಿಭುಜವನ್ನು ರಚಿಸಿ, ನಂತರ ಮತ್ತೊಂದು ತ್ರಿಭುಜವನ್ನು ಅದರ ಬಾಹುಗಳು ಮೊದಲು ರಚಿಸಿದ ಸಮದ್ವಿಬಾಹು ತ್ರಿಭುಜದ ಅನುರೂಪ ಬಾಹುಗಳ 1\(\frac { 1 }{ 2 }\) ರಷ್ಟಿರುವಂತೆ ರಚಿಸಿ,

Question 33.
ಎರಡು ಕ್ರಮಾಗತ ಬೆಸ ಧನ ಪೂರ್ಣಾಂಕಗಳ ವರ್ಗಗಳ ಮೊತ್ತವು 290 ಆದರೆ ಆ ಪೂಣಾರ್ಂಕಗಳನ್ನು ಕಂಡುಹಿಡಿಯಿರಿ.
ಅಥವಾ
ಒಂದು ಆಯತಾಕಾರದ ಹೊಲದ ಕರ್ಣವು ಅದರ ಚಿಕ್ಕ ಬಾಹುವಿಗಿಂತ 60 m ಹೆಚ್ಚಾಗಿದೆ. ಅದರ ದೊಡ್ಡ ಬಾಹುವು ಚಿಕ್ಕ ಬಾಹುವಿಗಿಂತ 30 m ಹೆಚ್ಚಾಗಿದ್ದರೆ, ಆ ಹೊಲದ ಬಾಹುಗಳ ಉದ್ದಗಳನ್ನು ಕಂಡುಹಿಡಿಯಿರಿ.

Question 34.
Karnataka SSLC Maths Model Question Paper 4 Kannada Medium 4
ಅಥವಾ
sec A (1 – sin A) (sec A + tan A) = 1 ಎಂದು ಸಾಧಿಸಿ.

Question 35.
ಕೆಳಗಿನ ದತ್ತಾಂಶಗಳಿಗೆ ಓಜೀವ್ ನಕ್ಷೆಯನ್ನು ರಚಿಸಿ, (ಕಡಿಮೆ ವಿಧಾನ)
Karnataka SSLC Maths Model Question Paper 4 Kannada Medium 5

Question 36.
3x2 – x – 4 ಎಂಬ ಬಹುಪದೋಕ್ತಿಯ ಶೂನ್ಯತೆಗಳನ್ನು ಕಂಡುಹಿಡಿಯಿರಿ ಹಾಗು ಶೂನ್ಯತೆಗಳು ಮತ್ತು ಸಹಗುಣಕಗಳ ನಡುವಿನ ಸಂಬಂಧವನ್ನು ತಾಳೆ ನೋಡಿ.
ಅಥವಾ
x4 – 3x2 + 4x + 5 ನ್ನು x2 + 1 – x ದಿಂದ ಭಾಗಿಸಿ ಭಾಗಲಬ್ದ ಮತ್ತು ಶೇಷವನ್ನು ಕಂಡುಹಿಡಿಯಿರಿ.

V. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ: (4 × 4 = 16)

Question 37.
ಸಮಾಂತರ ಶ್ರೇಢಿಯ ಮೂರು ಪದಗಳ ಮೊತ್ತವು 15 ಮತ್ತು ಅವುಗಳ ಅಂತ್ಯಪದಗಳ ವರ್ಗಗಳ ಮೊತ್ತವು 58 ಆಗಿದೆ. ಶ್ರೇಢಿಯ ಆ ಮೂರು ಪದಗಳನ್ನು ಕಂಡುಹಿಡಿಯಿರಿ.
ಅಥವಾ
ಸಮಾಂತರ ಶ್ರೇಢಿಯ ಮೊದಲ 5 ಪದಗಳ ಮೊತ್ತವು ಮುಂದಿನ 5 ಪದಗಳ ಮೊತ್ತದ ನಾಲ್ಕನೇ ಒಂದು ಭಾಗದಷ್ಟಿದೆ. ಮೊದಲ ಪದ 2 ಆದರೆ, a20 = -112 ಎಂದು ಸಾಧಿಸಿ ಮತ್ತು S20 ನ್ನು ಕಂಡುಹಿಡಿಯಿರಿ.

Question 38.
ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು ಅವುಗಳ ಅನುರೂಪ ಬಾಹುಗಳ ವರ್ಗಗಳ ಅನುಪಾತಕ್ಕೆ ಸಮನಾಗಿರುತ್ತದೆ ಎಂದು ಸಾಧಿಸಿ.

Question 39.
ಒಂದು ಬಾವಿಯ ವ್ಯಾಸ 3 m ಮತ್ತು ಆಳ 14 m ಇರುವಂತೆ ತೋಡಿದೆ. ಭೂಮಿಯಿಂದ ತೆಗೆದ ಮಣ್ಣನ್ನು ಬಾವಿಯ ಸುತ್ತಲು ಸಮವಾಗಿ ಹರಡಿ 4 m ಅಗಲವಿರುವ ವೃತ್ತಾಕಾರದ ಕಟ್ಟೆಯನ್ನು ಕಟ್ಟಿದೆ. ಕಟ್ಟೆಯ ಎತ್ತರವನ್ನು ಕಂಡುಹಿಡಿಯಿರಿ.

Question 40.
ನಕ್ಷೆಯ ಮೂಲಕ ಸಮೀಕರಣಗಳನ್ನು ಬಿಡಿಸಿ.
2x + y = 8
x + 2y = 7

Solutions

I.
Solution 1.
(B) (3, 4, 6) (19, 12, 18)

Solution 2.
(D) \(\frac { 1 }{ 4 }\) πr2

Solution 3.
(A) (3, 4)

Solution 4.
(D) a = b × q + r

Solution 5.
(C) 3

Solution 6.
(D) 6

Solution 7.
(B) 1

Solution 8.
(C) 240 cm3

II.
Solution 9.
ತ್ರಿಭುಜದ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ಸರಳರೇಖೆಯು ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ.

Solution 10.
Karnataka SSLC Maths Model Question Paper 4 Kannada Medium 6

Solution 11.
Karnataka SSLC Maths Model Question Paper 4 Kannada Medium 7

Solution 12.
OA2 = OP2 – AP2 =102 – 82
⇒ OA2 = 100 – 64
⇒ OA2 = 100 – 64
⇒ OA = √36
⇒ OA = 6 cm
ವೃತ್ತದ ತ್ರಿಜ್ಯ = 6 cm

Solution 13.
cosec A = \(\frac { 4 }{ 3 }\)

Solution 14.
Karnataka SSLC Maths Model Question Paper 4 Kannada Medium 8

III.
Solution 15.
5000, 5200, 5400, ……… 7000.
a = 5000, d = 200 an = 7000, n = ?
an = a + (n – 1) d
⇒ 7000 = 5000 + (n – 1) 200
⇒ 7000 – 5000 = (n – 1) 200
⇒ 2000 = 200 (n – 1)
⇒ (n – 1) = 10
⇒ n = 10 + 1
⇒ n = 11
11 ನೇ ವರ್ಷದಲ್ಲಿ ಅವರ ಸಂಬಳ ₹ 7000 ಆಗುತ್ತದೆ.

Solution 16.
Karnataka SSLC Maths Model Question Paper 4 Kannada Medium 9

Solution 17.
3x + 4y = 10 …. (1)
2x – 2y = 2 …… (2)
ಸಮೀಕರಣ 2ನ್ನು 2ರಿಂದ ಗುಣಿಸಿದಾಗ
3x + 4y = 10
4x – 4y = 4
…………………
7x = 14
x = 2
3x + 4y = 10
3(2) + 4y = 10
4y = 10 – 6
y = 1
∴ x = 2, y = 1

Solution 18.
Karnataka SSLC Maths Model Question Paper 4 Kannada Medium 10

Solution 19.
Karnataka SSLC Maths Model Question Paper 4 Kannada Medium 11
ಅರ್ಧ ವೃತ್ತದ ವಿಸ್ತೀರ್ಣ = \(\frac { 77 }{ 4 }\) cm2

Solution 20.
R = 6 cm, r = 4 cm
Karnataka SSLC Maths Model Question Paper 4 Kannada Medium 12

Solution 21.
Karnataka SSLC Maths Model Question Paper 4 Kannada Medium 13

Solution 22.
Karnataka SSLC Maths Model Question Paper 4 Kannada Medium 14

Solution 23.
ಬಹುಪದೋಕ್ತಿ = ax2+ bx + c ಆಗಿರಲಿ
ಶೂನ್ಯತೆಗಳು α ಮತ್ತು β ಆಗಿರಲಿ
Karnataka SSLC Maths Model Question Paper 4 Kannada Medium 15

Solution 24.
x2 + 6x – 7 = 0
⇒ x2 + 6x = 7
⇒ x2 + 6x + 32 – 32 = 7
⇒ (x + 3)2 – 9 = 7
⇒ (x + 3)2 = 16
⇒ x + 3 = ±√16
⇒ x + 3 = ±4
⇒ x = ±4 – 3
⇒ x = +4 – 3 ಅಥವಾ x = -4 – 3
⇒ x = 1 ಅಥವಾ x = -7

Solution 25.
Karnataka SSLC Maths Model Question Paper 4 Kannada Medium 16

Solution 26.
Karnataka SSLC Maths Model Question Paper 4 Kannada Medium 17
Karnataka SSLC Maths Model Question Paper 4 Kannada Medium 18

Solution 27.
Karnataka SSLC Maths Model Question Paper 4 Kannada Medium 19

Solution 28.
ಚೀಲದಲ್ಲಿರುವ ಒಟ್ಟು ಚೆಂಡುಗಳು = n(S) = 3 + 5 = 8
ಕೆಂಪು ಚೆಂಡುಗಳು ಸಂಖ್ಯೆ = 3 = n(A)
ಕೆಂಪು ಚೆಂಡು ತೆಗೆಯುವ ಸಂಭವನೀಯತೆ = \(\frac { n(A) }{ n(S) }\)
ಕೆಂಪು ಚೆಂಡು ತೆಗೆಯುವ ಸಂಭವನೀಯತೆ = \(\frac { 3 }{ 8 }\)

Solution 29.
ವರ್ಗಗಳ ಘನಫಲ = 64cm3
ಬಾಹುವಿನ ಅಳತೆ = \(\sqrt [ 3 ]{ 64 }\) = 4 cm
ಆಯತ ಘನದ ಅಗಲ b = 4 cm
ಆಯತ ಘನದ ಉದ್ದ l = 8 cm (4 + 4)
ಆಯತ ಘನದ ಎತ್ತರ h = 4 cm
ಆಯತ ಘನದ ಮೇಲೈ ವಿಸ್ತೀರ್ಣ = 2 (lb + bh + hl)
= 2(8 × 4 + 4 × 4 + 4 × 8)
= 2(32 + 16 + 32)
= 160 cm2
ಆಯತ ಘನದ ಮೇಲೈ ವಿಸ್ತೀರ್ಣ = 160 cm2
ಅಥವಾ
14 cm ಎತ್ತರವಿರುವ ಒಂದು ಕುಡಿಯುವ ನೀರಿನ ಗಾಜಿನ ಲೋಟವು ಶಂಕುವಿನ ಭಿನ್ನಕದ ರೂಪದಲ್ಲಿದೆ. ಅದರ ಎರಡು ವೃತ್ತಾಕಾರದ ಪಾದಗಳ ವ್ಯಾಸಗಳು 4 cm ಮತ್ತು 2 cm ಗಳಾಗಿವೆ. ಗಾಜಿನ ಲೋಟ ಸಾಮರ್ಥ್ಯವನ್ನು ಕಂಡುಹಿಡಿಯಿರಿ.

Solution 30.
12 = 2 × 2 × 5
15 = 3 × 5
ಮ.ಸಾ.ಅ. = 5
ಲ.ಸಾ.ಅ. = 2 × 2 × 3 × 5
ಲ.ಸಾ.ಅ. = 60

IV.
Solution 31.
Karnataka SSLC Maths Model Question Paper 4 Kannada Medium 20
ದತ್ತ: ‘O’ ವೃತ್ತಕೇಂದ್ರ, XY ಸ್ಪರ್ಶಕ, Pಸ್ಪರ್ಶಬಿಂದು
ಸಾಧನೀಯ: OP ⊥ XY
ರಚನೆ: P ಯನ್ನು ಹೊರತುಪಡಿಸಿ XY ಮೇಲೆ ಮತ್ತೊಂದು ಬಿಂದು Q ಆಗಿರಲಿ, OQ ಸೇರಿಸಿ.
ಸಾಧನೆ: OQ ವೃತ್ತವನ್ನು ಬಿಂದುವಿನಲ್ಲಿ ಛೇದಿಸಿದೆ.
OP = OR (ಒಂದೇ ವೃತ್ತದ ತ್ರಿಜ್ಯಗಳು)
OQ = OR + RQ
OQ > OR
OQ > OP (OP = OR)
OP ಯು O ನಿಂದ ಸ್ಪರ್ಶಕಕ್ಕೆ ಕನಿಷ್ಟ ದೂರವಾಗಿದೆ
OP ⊥ XY
ಅಥವಾ
Karnataka SSLC Maths Model Question Paper 4 Kannada Medium 22
ಸಾಧನೀಯ: ABCD ಒಂದು ವಜ್ರಾಕೃತಿ. (AB = BC = CD = AD)
ಸಾಧನೆ: AB = CD ಮತ್ತು AD = BC …… (1)
AP = AS, BP = BQ, CQ = CR, DS = DR
(ಬಾಹ್ಯಬಿಂದುವಿನಿಂದ ವೃತ್ತಕ್ಕೆ ಎಳೆದ ಸ್ಪರ್ಶಕಗಳು)
AB + CD = AP + PB + DR + CR
⇒ AB + CD = AS + BQ + DS + CQ
⇒ AB + CD = AS + DS + BQ + CQ
⇒ AB + CD = AD + BC
⇒ AB + AB = AD + AD [AB = CD, AD = BC]
⇒ 2AB = 2AD
⇒ AB = AD ….. (2)
∴ AB = BC = CD = AD (ಸಮೀಕರಣ (1) & (2) ರಿಂದ)

Solution 32.
Karnataka SSLC Maths Model Question Paper 4 Kannada Medium 23

Solution 33.
ಕ್ರಮಾಗತ ಬೆಸ ಧನ ಪೂರ್ಣಾಂಕಗಳು x & x + 2
x2 + (x + 2)2 = 290
⇒ x2 + x2 + 4x + 4 – 290 = 0
⇒ 2x2 + 4x – 286 = 0
⇒ x2 + 2x – 143 = 0
⇒ x2 + 13x – 11x – 143 = 0
⇒ x (x + 13) – 11(x + 13) = 0
⇒ (x + 13) (x – 11) = 0
⇒ x + 13 = 0 ಅಥವಾ x – 11 = 0
⇒ x = -13 ಅಥವಾ x = 11
ಕ್ರಮಾಗತ ಬೆಸ ಧನ ಪೂರ್ಣಾಂಕಗಳು 11 & 13
[∴ x = 11 & x + 2 = 11 + 2 = 13]
ಅಥವಾ
Karnataka SSLC Maths Model Question Paper 4 Kannada Medium 24
ಚಿಕ್ಕ ಬಾಹು x ಆಗಿರಲಿ
AC2 = AB2 + BC2
⇒ (x + 60)2 = x2 + (x + 30)2
⇒ x2 + 3600 + 120x = x2 + x2 + 900 + 60x
⇒ x2 + 3600 + 120x – 2x2 – 900 – 60x = 0
⇒ -x2 + 2700 + 60x = 0
⇒ x2 – 60x – 2700 = 0
⇒ x2 – 90x + 30x – 2700 = 0
⇒ x (x – 90) + 30 (x – 90) = 0
⇒ x – 90 = 0 ಅಥವಾ x + 30 = 0
⇒ x = 90 ಅಥವಾ x = -30
ಚಿಕ್ಕ ಬಾಹುವಿನ ಉದ್ದ = x = 90 m
ದೊಡ್ಡ ಬಾಹುವಿನ ಉದ್ದ = x + 30 = 90 + 30 = 120 m

Solution 34.
Karnataka SSLC Maths Model Question Paper 4 Kannada Medium 25
Karnataka SSLC Maths Model Question Paper 4 Kannada Medium 26

Solution 35.
Karnataka SSLC Maths Model Question Paper 4 Kannada Medium 27

Solution 36.
Karnataka SSLC Maths Model Question Paper 4 Kannada Medium 28
Karnataka SSLC Maths Model Question Paper 4 Kannada Medium 29

V.
Solution 37.
ಸಮಾಂತರ ಶ್ರೇಢಿಯ ಮೂರು ಪದಗಳು
a – d, a, a + d
a – d + a + a + d = 15
⇒ 3a = 15
⇒ a = 5
(a – d)2 + (a + d)2 = 58
⇒ a2 + d2 – 2ad + a2 + d2 + 2ad = 58
⇒ 2a2 + 2d2 = 58
⇒ 2(a2 + d2) = 58
⇒ a2 + d2 = 29
⇒ 52 + d2 = 29
⇒ d2 = 29 – 25
⇒ d2 = 4
⇒ d = ± 2
⇒ d = 2 ಅಥವಾ d = -2
ಮೂರು ಪದಗಳು
∴ a – d = 5 – 2 = 3
∴ a = 5
∴ a + d = 5 + 2 = 7
ಅಥವಾ
Karnataka SSLC Maths Model Question Paper 4 Kannada Medium 30
Karnataka SSLC Maths Model Question Paper 4 Kannada Medium 31

Solution 38.
Karnataka SSLC Maths Model Question Paper 4 Kannada Medium 32
Karnataka SSLC Maths Model Question Paper 4 Kannada Medium 33

Solution 39.
Karnataka SSLC Maths Model Question Paper 4 Kannada Medium 34
Karnataka SSLC Maths Model Question Paper 4 Kannada Medium 35

Solution 40.
Karnataka SSLC Maths Model Question Paper 4 Kannada Medium 36
Karnataka SSLC Maths Model Question Paper 4 Kannada Medium 37
Karnataka SSLC Maths Model Question Paper 4 Kannada Medium 38

We hope the given Karnataka SSLC Maths Model Question Paper 4 Kannada Medium will help you. If you have any query regarding Karnataka SSLC Maths Model Question Paper 4 Kannada Medium, drop a comment below and we will get back to you at the earliest.

Karnataka SSLC Science Model Question Paper 5

Karnataka SSLC Science Model Question Paper 5 part of Karnataka SSLC Science Model Question Papers. Here we have given Karnataka SSLC Science Model Question Paper 5.

Board KSEEB, Karnataka Board
Textbook KTBS, Karnataka
Class SSLC Class 10
Subject Science
Paper Set Model Paper 5
Category Karnataka Board Model Papers

Karnataka SSLC Science Model Question Paper 5

Time: 3 Hrs.
Max. Marks : 80

I. Four alternatives sire provided for each question. Choose the most appropriate alternative and write it with its alphabet. 10 × 1 = 10

Question 1.
Name the S.I. unit of electric change.
a) Ohm
b) VOH
c) Coloumb
d) Ampere

Question 2.
The substance which is used in a solution for whitewashing is
a) CaO
b) Ca(OH)2
c) CaCO3
d) NaOH

Question 3.
Which of the following lenses would you prefer to use while reading small letters found in a dictionary ?
a) A convex lense of focal length 50 cm
b) A concave lens of focal length 50 cm
c) A convex lens of focal length 5 cm
d) A concave lens of focal length 50 cm

Question 4.
Identify the correct pair of homologous organs among the following.
a) Wings of butterfly and bird
b) The wings of a bat and wings of a bird,
c) The wings of a bird and an insect
d) Human forelimbs and bird wings

Question 5.
Observe the following chemical equations and identify the balanced equation.
a) Fe + H2O → Fe3O4 + H2
b) Fe3 + 4H2O → Fe3O4 + H2
c) 3Fe + 4H2O → Fe3O4 + 4H2
d) Fe3 + 4H2O → Fe3O4 + 4H2

Question 6.
The nature of the image formed by a convex mirror when the object is at infinity is
a) Virtual, errect and extremely diminished
b) A magnified and virtual
c) A diminished & virtual image
d) Virtual, Magnified and errect.

Question 7.
The correct order of binary fission in Amoeba is
Karnataka SSLC Science Model Question Paper 5 1
a) I II III IV V
b) I III II IV V
c) I IV III V II
d) I IV V II III

Question 8.
The PH value of the solution having highest hydrogen ion concentration is
a) 7.8
b) 1.0
c) 13.0
d) 1.4

Question 9.
The convexocencave lens among the following is
Karnataka SSLC Science Model Question Paper 5 2

Question 10.
Which of the following constitute a food chain ?
a) Grass, wheat and mango
b) Grass, goat and human
c) Goat, cow and elephant
d) Grass, fish and goat

Question 11.
Match the following:

A B
1. Phototropism (a)towards chemical responses
2. Geotropism (b) towards water
3. Chemotropism (c) Towards earth’s gravity
Hydrotropism (d) Towards light
e) Towards touuch of an object.

II. Answer the following:7 × 1 = 7

Question 12.
A thin lens has a focal length of -50cm. What is the power of lens and its nature ?

Question 13.
Why should fossil fuel be used with caution ?

Question 14.
When electricity is passed through an aqueous solution of sodium chloride, three products are obtained. Why is the process called chlor-alkali ?

Question 15.
A florist sprinkled a plant harmone to prevent wilting of leaves. Name the plant harmone he must have used.

Question 16.
Why are the traffic light signals of red colour ?

Question 17.
What is a chemical decomposition reaction ? Give examples.

Question 18.
Ventricles have thicker muscular walls than the atria, why ?

III. Answer the following questions: 16 × 2 = 32

Question 19.
An electric iron of resistance 20 Ω takes a current of 5A calculate the heat developed in 30 S.

Question 20.
Write any two differences between aerobic respiration and anaerobic respiration.
OR
How is oxygen and carbon dioxide transported in human beings ?

Question 21.
Draw the diagram of an illustration of the principle of electric generator and label the following parts.

  1. Slip rings
  2. Armature

Question 22.
Rahim, a student of class X lives in Delhi, he had an idea in his mind of setting up a thermal power plant in the nearby village. His friend Rohan suggested a solar cell panel to harness solar energy instead of thermal power plant.
Answer the following questions:

  1. Do you think that Rohan’s suggestion was appropriate? Justify your answer.
  2. Mention the quality Rohan displayed in his act.

Question 23.
What is Hypermetropia ? Name the lens used to correct Hypermetropia.

Question 24.
State Ohm’s law. Give its mathematical expression.
OR
What are the advantages of connecting electrical devices in parallel with the battery instead of connecting them in series ?

Question 25.
Draw the diagram of the electric circuit in which the resistors R1, R2 & R3 are connected in series including ammeter and voltmeter and mark the direction of current.

Question 26.
Draw a-labelled diagram of the arrangement of apparatus to show the electrolysis of water.

Question 27.
What is bleaching powder ? Explain the preparation of bleaching powder with the help of balanced chemical equation.

Question 28.
Draw the diagram showing the longitudinal section of a typical flower and label the parts.

Question 29.
What are sexually transmitted diseases ? Name an STD which damages the immune system of human body?

Question 30.
a) Arrange the metals in the decreasing order of reactivity with dilute hydrochloric acid. Mg. Zn, A1 and Fe. b) Hydrogen is not a metal but it has been assigned a place in the activity series of metals, why ?
OR
Give one most suitable word for the following statements.

  1. Metal oxides which show basic as well as acedic behaviour.
  2. Some metals produce a sound on striking a hard surface.

Question 31.
Write the balanced chemical equations for the chemical reactions given below,

  1. Magnesium reacts with dilute HNO3.
  2. Sodium reacts with water.

OR
A solution of copper sulphate was kept in an iron pot. After a few days, the iron pot was found to have a number of holes in it. Write the equation of the reaction that took place. Explain this reaction in terms of reactivity.

Question 32.
What are the practices that can protect our environment ?

Question 33.
What is an homologous series ? Write the general formula of

  1. alkenes and
  2. alkynes

OR
Draw the stuctures for the following compounds,

  1. Ethanoic acid
  2. Bromopentane

Question 34.
Draw the ray diagram showing the formation of the image, when the object is kept at the principle focus (F) of a concave mirror.

IV. Answer the following questions : 5 × 3 = 15

Question 35.
Draw the diagram showing the structure of a human alimentary canal and label the parts.

Question 36.
Name the type of mirror used in the following situations and support your answer with reason.
a) Head Lights of a car
b) Side or rear-view mirror of a vehicle
c) Solar furnace.
OR
Define absolute refractive index of a medium. The refractive index of diamond is 2.42. What is the meaning of this statement ? For which medium is refractive index is minimum ?

Question 37.
How has the traditional use of wind and water energy been modified for our convenience ?
OR
“We are looking for alternative sources of energy”, State three reasons for it.

Question 38.
Nitrogen (atomic number – 7) and phosphorous (atomic number 15) belong to group 15 of the periodic table write the electronic configuration of these two elements. Which of these will be more electronegative? Why?

Question 39.
Draw the diagram of the apparatus used for electrolytic refining of copper and label the parts.

V. Answer the following questions : 3 × 4 = 12

Question 40.
a) What are sex chromosomes ? Name the two types of sex chromosomes.
b) Which sex chromosomes are found in male and female human beings ?
State the chromosome responsible for the development of male child in human beings.
OR
a) How do Mendel’s experiments show that traits may be dominant or recessive ?
b) What is Darwin’s theory of evolution ?

Question 41.
a) Explain decomposition reaction with an example and chemical equation
b) Why is respiration considered as exothermic reaction ? Explain.

Question 42.
A coil of insulated copper wire is connected to a galvanometer as shown in the figure. What will happen if North pole of an bar magnet is
Karnataka SSLC Science Model Question Paper 5 3

  1. pushed into the coil ?
  2. Withdrawn from inside the coil ?
  3. held stationary inside the coil ?
  4. Name and state the phenomenon.

Answers

I.
Answer 1:
c) Coulomb

Answer 2:
a) CaO

Answer 3:
c) A Convex lens of focal length 5 cm.,

Answer 4:
d) Human forelimbs and bird wings.

Answer 5:
c) 3Fe + 4H2O → Fe3O4 + 4H2

Answer 6:
a) Virtual, errect and extremely diminished,

Answer 7:
b) I III II IV V

Answer 8:
b) 1.0

Answer 9:
Karnataka SSLC Science Model Question Paper 5 4

Answer 10:
b) Grass, goat and human

Answer 11:
l-(d),2-(c),3-(a),4-(b)

Answer 12:
Power of lens, \(P=\frac{1}{f(i n m)}\)
Karnataka SSLC Science Model Question Paper 5 5
Its nature is concave because its focal length is negative.

Answer 13:
It took millions of years for fossil fuels to be formed. So if all the fossil fuels are exhausted today, then it takes a long period of million of years to form again. So they should be used with care and caution.

Answer 14:
When sodium chloride is electrolysed, sodium is obtained at cathode which then reacts with water to give alkali and hydrogen. Thus alkali is the main product, on the other hand Chlorine is obtained at anode. So it is called chlor-alkali process.

Answer 15:
Cytokinins [because they induce cell elongation and delay aging they enhance chloroplast development in leaves].

Answer 16:
In the visible spectrum, the red colour has the largest wavelength. The red colour is least scattered by fog or dust particles. So we can observe red colour easily even in foggy and dusty conditions.

Answer 17:
The reaction in which a single reactant breaks down to give simpler products is called chemical decomposition reaction.
Karnataka SSLC Science Model Question Paper 5 6

Answer 18:
Because in ventricles, blood comes with pressure as compared to the atrium.

Answer 19:
Given I = 5A, R=20Ω , t=30 s
Heat developed H = ?
H = I2Rt = 52 × 20 × 30 = 25 × 20 × 30
H = 15000 J

Answer 20:

Aerobic respiration Anaerobic respiration
1. Aerobic respiration takes place in the presence of oxygen. 1. Anaerobic respiration takes place in the absence of oxygen
2. In aerobic respiration complete oxidation of glucose takes place. 2. The glucose molecule is incompletely broken down.
3. End products are CO2 and water. 3. End products are ethyle alcohol [or lactic acid] and CO2
4. More energy is released. 4. Little energy is released.

OR
a) Transport of Oxygen: In human beings the respiratory pigment called haemoglobin present in the red blood corpuscles carry oxygen to different tissues of the body. The respiratory pigment present in the blood takes up the oxygen from the air in the lungs and carry it to tissues which are deficient in oxygen.
b) Transport of carbon dioxide: Carbon dioxide is more soluble in water. Therefore it is mostly transported in dissolved form through blood plasma. Blood plasma transports carbon dioxide from the tissues to the lungs.

Answer 21:
Karnataka SSLC Science Model Question Paper 5 7

Answer 22:

  1. Rohan’s suggestion is more appropriate as setting up of thermal plant is more cumbersome and is likely to cause lots of pollution.
  2. Rohan displayed more maturity and practicality.

Answer 23:
Hypermetropia or long sightedness is a vision defect in which a person can see the distant objects clearly but cannot see the nearby objects clearly.
A hypermetropia is corrected by using a convex lens of suitable focal length.

Answer 24:
Ohm’s law states that the current (I) flowing through a conductor is directly proportional to the potential difference (v) applied across its ends, provided the temperature and other physical conditions remain unchanged.
Mathematical expression is V α I or V=RI
Where ‘R’ is the propertionality constant and is called resistance of the conductor.
OR
The advantages of connecting electrical devices in parallel with the battery are as follows.

  1. Each device gets the full battery voltage.
  2. The parallel circuit devides the current through the electrical devices. Each device gets proper current depending on its resistance.

Answer 25:
Karnataka SSLC Science Model Question Paper 5 8

Answer 26:
Karnataka SSLC Science Model Question Paper 5 9

Answer 27:
Calcium Oxychloride [CaOCl2] is called bleaching powder.
Preparation : This is prepared by passing chlorine gas over dry slaked lime for a long time. Equation : Ca(OH)2 + Cl2 → CaOCl2 + H2O

Answer 28:
Karnataka SSLC Science Model Question Paper 5 10

Answer 29:
The diseases which are transmitted from one person to another by the sexual act are called sexually transmitted diseases (STD). These include bacterial infections like gonorrhoea and syphilis and viral infections like warts and AIDS.

AIDS is the STD which damages the immune system of human body. It is caused by HIV
NOTE: [AIDS → Acquired Immuno Deficiency Syndrome]
[HIV → Human Immuno deficiency virus]

Answer 30:
a) Mg > Al > Zn > Fe
b) The reactivity of metals depends on the ease with which they can lose electrons. Hydrogen also loses one electron more easily than some other metals and forms positive ions. Therefore it also finds a place in the activity series of metals.
OR

  1. Amphoteric oxide,
  2. Sonorous

Answer 31:
i) Mg(s) + 2HNO3(aq) → Mg(NO3 )2 + H2(g)
ii) 2Na(s) + 2H2O → 2NaOH + H2(g)
OR
Iron is more reactive than copper and so iron displaces copper from copper sulphate solution. Since iron is being consumed, hole appear in the pot on the other hand, CU2++ ions in solution change into copper metal.
Equation : CuSO4 + Fe → FeSO4 + Cu
Reactivity:
\(\begin{array}{l}{F e_{(s)} \rightarrow F e_{(a q)}^{2+}+2 e^{-}} \\ {C u_{(a q)}^{2+}+2 e \rightarrow C u_{(S)}} \\ {F e_{(S)}+C u_{(a q)}^{2+} \rightarrow C u_{(S)}+F e^{2+}}\end{array}\)

Answer 32:
Practices that can protect our environment are

  1. Disposal of the wastes after separating them into biodegradable and non-biodegradable waste material.
  2. Use of unlead petrol and alternate sources of energy and keeping the automobile vehicle engines properly tune to avoid pollution.
  3. Installation of tall chumneys in factories. These may be fitted with removal of gaseous and particulate emissions devices.
  4. Use of smokeless fuels in homes and industries.
  5. Plantation of trees. They will help to absorb excess of CO2 and pollution.
  6. Do not burn any waste, especially plastics, as the smoke contains polluting gases.

Answer 33:
A homologous series is a group or family of compounds which contains the same functional group but have different chain lengths. These chains can be branched also. Thus, these have the same chemical properties but different physical properties that vary in a regular manner.
The general formula of

i) alkenes is CnH2n
ii) alkynes is CnH2n-2 Where n=2, 3, 4, etc,.
Organism
i) Ethanoic acid:
Karnataka SSLC Science Model Question Paper 5 11

ii) Bromopentane:
Karnataka SSLC Science Model Question Paper 5 12

Answer 34:
Karnataka SSLC Science Model Question Paper 5 13

Answer 35:
Karnataka SSLC Science Model Question Paper 5 14

Answer 36:
a) Concave mirrors are used as reflectors in headlights of cars. Because, when a bulb is located at the focus of the concave mirror, the light rays after reflection from the mirror travel over a large distance as a parallel beam of high intensity.
b) A Convex mirrors is used as a side or rear view mirror of a vehicle because it always forms an erect, virtual and diminished image and it has a wider field of view than a plane mirror of the same size.
c) Large concave mirrors are used to concentrate sunlight to produce heat in Solar furnaces.
OR
The refractive index of a medium for a light of given wavelength may be defined as the ratio of the speed of light in vaccum to its speed in that medium. It is denoted by n
Karnataka SSLC Science Model Question Paper 5 15
The refractive index of a medium with respect to vacuum is also called its absolute refractive index.
The refractive index of diamond is 2.42 means that the ratio of speed of light in air to that in diamond is 2.42.
Refractive index is minimum for vacuum i.e. (n=1)

Answer 37:
Water Energy: To use water energy for producing electricity, a large number of high rise dams are constructed on the suitable river spots to obstruct the flow of water and collect water in large reservoirs. The kinetic energy of the flowing water is converted into potential energy. Then the water from the high level in the dam is carried through pipes to the turbine at the bottom of the dam. Thus the potential energy of falling water is converted into electrical energy.

Wind Energy: Wind mill farms are constructed at places where wind flows for greater part of the year at a speed greater than 15 km/h. The kinetic energy of the wind is converted into rotatory motion of wind mill. Then the rotatory motion of the wind mill is used to turn the turbine of electric generator.
OR
Non conventional sources of energy means such sources which are not in routine use so far like solar- energy, geothermal energy etc,. As industrialization is growing and our living standards are improving our conventional sources of energy are depleting and so we have to tap new sources and develop and so we have to tap new sources and develop technology to capture and store energy from such sources.

Further most of the conventional sources of energy are causing air pollution, health hazards and environment imbalance.
Hence we are looking for alternative sources of energy.

Answer 38:
Electronic Configuration of
Nitrogen [at No. 15] is 1S2 2S2 2P3 or 2, 5
Phosphorus [at No. 15] 1S2, 2S2 2P6, 3S2 3P3 or 2,8, 5
Nitrogen will be more electronegative because outermost shell is nearer to nucleus and thus nucleus will attract electrons more strongly.

Answer 39:
Karnataka SSLC Science Model Question Paper 5 16

Answer 40:
a) The chromosomes which determines sex of a person are called sex chromosomes. These are two types of sex chromosomes. They are X chromosome and Y chromosome
b) A male has one X chromosome and one Y-Chromosome.
A female has two X chromosomes.
If a sperm carrying Y chromosome fertilises an egg which carries X-Chromosomes then the child born will be a male.
OR
a) When mendel cross pollinated pure tall pea plants with pure dwarf pea plant he got tall plants in F: generation. When mendel self pollinated Fj tall plants, he got both tall and dwarf plants in the ratio 3:1. This shows that dwarf character was present in Fj tall plants but it was not expressed and only trait of tallness was expressed. From this we may conclude that triats may be dominant or recessive. The traits which gets expressed in the presence of its contrasting form gets expressed in the presence of its contrasting form is called dominant trait and the trait which remains unexpressed in the presence of its contrasting form its called recessive trait.
b) Organism multiply in large numbers but the number of survivors is roughly constant. There is struggle for existance and due to acting upon by natural selection on variation there is survival of the fittest, which leads to the formation of new species.

Answer 41:
a) Decomposition Reaction :
The reaction in which a compound splits up into two or more simpler substances is called decomposition reaction [In most of the decomposition reactions heat is used. This is called thermal decomposition. Some times light electricity or catalyst is also used]
Eg.: Electrolytic decomposition :
Water decomposes when electricity is passed through it.
\(2{ H }_{ 2 }O\underrightarrow { electricity } 2{ H }_{ 2 }+{ O }_{ 2 }\)
b) During digestion food is broken down into simpler substances food like rice, potato and bread are made up of carohydrates. These carbohydrates are further broken down to glucose. Glucose during respiration (inhalation of oxygen) is oxidised with the liberation of energy as shown below.
Karnataka SSLC Science Model Question Paper 5 17

Answer 42:

  1. There is a momentary deflection in the needle of the galvanometer scy to right. This indicates the presence of a current in the coil AB.
  2. Now the galvanometer is deflected towards left showing that the current is now set up in the direction opposite to the first.
  3. When the magnet is held stationary inside the coil, tne deflection of the galvanometer drops to zero. This shows that no current is set up in the coil.
  4. This phenomenon is Electromagnetic induction. Hence the change in magnetic field lines associated with the coil is the cause of induced electric current in it. This phenomenon in which a changing magnetic field in coil induces a current in coil is called electromagnetic induction.

We hope the Karnataka SSLC Science Model Question Paper 5 help you. If you have any query regarding Karnataka SSLC Science Model Question Paper 5, drop a comment below and we will get back to you at the earliest.

Karnataka SSLC Science Model Question Paper 2 Kannada Medium

Karnataka SSLC Science Model Question Paper 2 Kannada Medium is part of Karnataka SSLC Science Model Question Papers. Here we have given Karnataka SSLC Social Science Model Question Paper 2 Kannada Medium.

Board KSEEB, Karnataka Board
Textbook KTBS, Karnataka
Class SSLC Class 10
Subject Science
Paper Set Model Paper 2
Category Karnataka Board Model Papers

Karnataka SSLC Science Model Question Paper 2 Kannada Medium

ಸಮಯ: 3 ಗಂಟೆಗಳು
ಗರಿಷ್ಠ ಅಂಕಗಳು: 80

I ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅತ್ಯಂತ ಸೂಕ್ತವಾದ ಆಯ್ಕೆಯನ್ನು ಆರಿಸಿ ಕ್ರಮಾಕ್ಷರದೊಂದಿಗೆ ಬರೆಯಿರಿ. [10 × 1 = 10]

Question 1.
ಕಬ್ಬಿಣದ ಮೊಳೆಯನ್ನು CuSO4 ದ್ರಾವಣಕ್ಕೆ ಸೇರಿಸಿದಾಗ ಉಂಟಾಗುವ ಬಣ್ಣದಲ್ಲಿನ ಬದಲಾವಣೆ
A) ನೀಲಿ
B) ಹಸಿರು
C) ಕೆಂಪು
D) ತಿಳಿಹಳದಿ

Question 2.
ಕೆಳಗಿನವುಗಳಲ್ಲಿ ವಿದ್ಯುತ್‌ವಾಹಕವಲ್ಲದ ಜಲೀಯ ದ್ರಾವಣ
A) ಆಸಿಟಿಕ್ ಆಮ್ಲ
B) ಈಥೈಲ್ ಅಸಿಟೇಟ್ ದ್ರಾವಣ
C) NaCl ದ್ರಾವಣ
D) ಎಥನಾಲ್

Question 3.
ಉಸಿರಾಟದಲ್ಲಿ ಗಾಳಿಯ ಚಲನೆಯ ಸರಿಯಾದ ಅನುಕ್ರಮಣಿಕೆ
A) ನಾಸಿಕರಂಧ್ರ → ಗಾಳಿ ಚೀಲಗಳು → ಶ್ವಾಸನಾಳ → ಬ್ರಾಂಕಸ್
B) ನಾಸಿಕರಂದ್ರ → ಶ್ವಾಸಕೋಶ → ಶ್ವಾಸನಳಿಕೆ → ಗಂಟಲು → ಆಲ್ವಿಯೋಲೆ
C) ನಾಸಿಕರಂದ್ರ → ಗಂಟಲು → ಶ್ವಾಸನಾಳ → ಶ್ವಾಸನಾಳದ ಕವಲು → ಆಲ್ವಿಯೋಲೈ
D) ನಾಸಿಕರಂದ್ರ → ಶ್ವಾಸನಾಳ → ಗಂಟಲು → ಆಲ್ವಿಯೋಲೈ → ಶ್ವಾಸನಾಳದ ಕವಲು

Question 4.
ಗೃಹಬಳಕೆಯ ವಿದ್ಯುತ್ ಉಪಕರಣಗಳ ರಕ್ಷಣೆಯಲ್ಲಿ ನಾವು ಇದನ್ನು ಬಳಸುತ್ತೇವೆ.
A) ಬಲ್ಸ್
B) ಸ್ವಿಚ್
C) ವಿದ್ಯುತ್ ಮೀಟರ್
D) ನ್ಯೂಸ್

Question 5.
ಅತಿ ಹೆಚ್ಚು ದ್ರವಣ ಬಿಂದು ಹೊಂದಿರುವುದು
A) ಮೆಥಾಲ್
B) ಸೋಡಿಯಂ ಕ್ಲೋರೈಡ್
C) ಬೋಮಿನ್
D) ಸೀಸಿಯಂ

Question 6.
ಆವರ್ತಕೋಷ್ಟಕದಲ್ಲಿ ‘X’ ಧಾತುವು 3ನೇ ಆವರ್ತದಲ್ಲಿದ್ದು ಅತ್ಯಂತ ಕಡಿಮೆ ಪರಮಾಣು ಗಾತ್ರವನ್ನು ಹೊಂದಿದೆ. ಹಾಗಾದರೆ ಅದು ಹೊಂದಿರುವ ಗುಣ,
A) ಲೋಹೀಯ ಗುಣ
B) ವಿದ್ಯುದ್ದನೀಯ
C) ಅಲೋಹೀಯ ಗುಣ
D) ಇಲೆಕ್ಟ್ರಾನ್ ದಾನಿ

Question 7.
ಬಿಡುಗಡೆಯಾದ ಅಂಡವನ್ನು ಸ್ವೀಕರಿಸುವ ಭಾಗ
A) ಫೆಲೋಪಿಯನ್ ನಾಳ
B) ಗರ್ಭಕೋಶ
C) ಯೋನಿ
D) ಅಂಡಾಶಯ

Question 8.
ವಸ್ತುವನ್ನು ಪೀನಮಸೂರದ F1 ನಲ್ಲಿಟ್ಟಾಗ ಪ್ರತಿಬಿಂಬದ ಗಾತ್ರವು.
A) ಚುಕ್ಕೆ ಗಾತ್ರದಷ್ಟು
B) ಚಿಕ್ಕದು
C) ಸಮಾನ ಗಾತ್ರ
D) ದೊಡ್ಡದು

Question 9.
ಕಣ್ಣಿನ ಮಸೂರ ತನ್ನ ಸ್ಥಿತಿಸ್ಥಾಪಕ ಗುಣ ಕಳೆದುಕೊಳ್ಳುವುದು ಮತ್ತು ಸಿಲಿಯಂ ಸ್ನಾಯುಗಳು ದುರ್ಬಲಗೊಂಡಾಗ ಉಂಟಾಗಬಹುದಾದ ಕಣ್ಣಿನ ದೋಷ.
A) ದೂರ ದೃಷ್ಟಿ
B) ಸಮೀಪದೃಷ್ಟಿ
C) ಪ್ರೆಸ್ ಬಯೋಪಿಯ
D) ಡಯಾಬಿಟಿಕ್ ರೆಟಿನೋಪತಿ

Question 10.
ಕೆಂಪು ರಕ್ತಕಣಗಳ ಆಕ್ಸಿಜನ್ ಸಾಗಾಣಿಕೆಯನ್ನು ಕಡಿಮೆ ಮಾಡುವ ಮಾಲಿನ್ಯಕಾರಕ
A) CO
B) CO2
C) SO2
D) NO2

II ಹೊಂದಿಸಿ ಬರೆಯಿರಿ. [4 × 1 = 4]

Question 11.
Karnataka SSLC Science Model Question Paper 2 Kannada Medium 11

III ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. [7 × 1 = 7]

Question 12.
ಹಲ್ಲು ಉಜ್ಜಲು ಪ್ರತ್ಯಾಮ್ಲಯ ಪೇಸ್ಟನ್ನೇ ಬಳಸಬೇಕು. ಏಕೆ?

Question 13.
ಸ್ಪರ್ಶಾನುವರ್ತನೆಗೆ ಒಂದು ಉದಾಹರಣೆ ಕೊಡಿ.

Question 14.
ವಿದ್ಯುತ್ ಮೋಟಾರಿನ ತತ್ವವನ್ನು ತಿಳಿಸಿ.

Question 15.
ವಾಷಿಂಗ್ ಸೋಡವನ್ನು ಬಳಸಿ ಎಥನಾಲ್ ಮತ್ತು ಎಥನೋಯಿಕ್ ಆಮ್ಲಗಳನ್ನು ಹೇಗೆ ಪತ್ತೆ ಹಚ್ಚುವಿರಿ?

Question 16.
ಆನುವಂಶೀಯ ದಿಕ್ಕುತಿ ಎಂದರೇನು?

Question 17.
2m ಸಂಗಮದೂರವುಳ್ಳ ನಿಮ್ಮ ಮಸೂರದ ಸಾಮರ್ಥ್ಯವೆಷ್ಟು?

Question 18.
ಸೌರಕುಕ್ಕರಿಗೆ ಬಿಳಿಯ ಬಣ್ಣ ಬಳಿಯುವುದರಿಂದ ಉಂಟಾಗುವ ಪರಿಣಾಮವೇನು?

IV ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. [16 × 2 = 32]

Question 19.
ಎಥನಾಲನ್ನು 443K ತಾಪಕ್ಕೆ ಕಾಸುವಾಗ H2SO4 ಏಕೆ ಬಳಸುತ್ತಾರೆ? ಸಮೀಕರಣ ಬರೆಯಿರಿ.

Question 20.
ವಾಷಿಂಗ್ ಸೋಡಾದ 2 ಅನ್ವಯಗಳನ್ನು ತಿಳಿಸಿ,
ಅಥವಾ
ಭೀಚಿಂಗ್ ಪುಡಿಯನ್ನು ಹೇಗೆ ತಯಾರಿಸುತ್ತಾರೆ? ಸಮೀಕರಣ ಬರೆಯಿರಿ.

Question 21.
ಲೋಹಗಳ ಕ್ರಿಯಾಶೀಲತೆಯ ಸರಣಿಯ ಅನ್ವಯಗಳೇನು?
ಅಥವಾ
Na, Al, Mg, Au, K, Pb, Zn, Ca, Fe ಗಳನ್ನು ಅವುಗಳ ಕ್ರಿಯಾಶೀಲತೆಯ ಏರಿಕೆಯ ಆಧಾರದಲ್ಲಿ ಜೋಡಿಸಿ.

Question 22.
ದಂಡಕಾಂತದ ಸುತ್ತಲಿನ ಕಾಂತೀಯ ಬಲರೇಖೆಗಳನ್ನು ತೋರಿಸುವ ಚಿತ್ರ ಬರೆಯಿರಿ. ಬಲರೇಖೆಗಳ ದಿಕ್ಕನ್ನು ಸೂಚಿಸಿ.

Question 23.
ಮಾನವರಲ್ಲಿ ಗ್ಲುಕೋಸ್ ವಿಭಜನೆಯ ವಿವಿಧ ಹಂತಗಳನ್ನು ತಿಳಿಸಿ.

Question 24:
ವಾಹಕದ ರೋಧವನ್ನು ಅವಲಂಬಿಸಿದ ಅಂಶಗಳಾವುವು?
ಅಥವಾ
ವಿದ್ಯುತ್ ಟೋಸ್ಟರ್ ಮತ್ತು ಇಸ್ತ್ರಿಪೆಟ್ಟಿಗೆಯ ಸುರುಳಿಗಳನ್ನು ಶುದ್ಧ ಲೋಹದ ಬದಲಿಗೆ ಮಿಶ್ರಲೋಹಗಳಿಂದ ತಯಾರಿಸಿರುತ್ತಾರೆ. ಏಕೆ?

Question 25.
ಜೈವಿಕ ಶಿಥಿಲೀಯವಲ್ಲದ ತ್ಯಾಜ್ಯಗಳು ಪರಿಸರದ ಮೇಲೆ ಬೀರುವ ಎರಡು ಪರಿಣಾಮಗಳನ್ನು ತಿಳಿಸಿ. ಇವುಗಳ ಸುರಕ್ಷಿತ ವಿಲೇವಾರಿಗೆ ಎರಡು ವಿಧಾನಗಳನ್ನು ತಿಳಿಸಿ.

Question 26.
ಪ್ರೊಪೇನೋಯಿಕ್ ಆಮ್ಲ ಮತ್ತು ಸೈಕೋ ಹೆಕ್ಟೇನ್‌ಗಳ ರಚನೆಯನ್ನು ಬರೆಯಿರಿ.

Question 27.
K, L, M, N ಮತ್ತು ಧಾತುಗಳ ಪರಮಾಣು ಸಂಖ್ಯೆ 7, 10, 12, 4 ಮತ್ತು 19 ಆದರೆ,

  1. ಅತ್ಯಂತ ಹೆಚ್ಚು ಪರಮಾಣು ಗಾತ್ರ ಹೊಂದಿರುವ ಧಾತು ಯಾವುದು?
  2. ಅತ್ಯಂತ ಕಡಿಮೆ ಕ್ರಿಯಾಶೀಲ ಧಾತು ಯಾವುದು? ಕಾರಣ ತಿಳಿಸಿ,

Question 28.
Karnataka SSLC Science Model Question Paper 2 Kannada Medium 28
ಚಿತ್ರದಲ್ಲಿ ತೋರಿಸಲಾದ A ಮತ್ತು B ಗಳನ್ನು ಗುರುತಿಸಿ, ಅವುಗಳ ಕಾರ್ಯವನ್ನು ತಿಳಿಸಿ.

Question 29.
ಮಗುವಿನ ಲಿಂಗ ನಿರ್ಧಾರದಲ್ಲಿ ತಂದೆಯ ಪಾತ್ರವೇನು? ವಿವರಿಸಿ

Question 30.
ನಿಮಗೆ 3 ವಿಧದ ದರ್ಪಣಗಳನ್ನು ನೀಡಿದೆ, ದರ್ಪಣಗಳನ್ನು ಸ್ಪರ್ಶಿಸದೇ 3 ವಿಧದ ದರ್ಪಣಗಳನ್ನು ಹೇಗೆ ಗುರುತಿಸುವಿರಿ?
ಅಥವಾ
ಅನುಕ್ರಮವಾಗಿ 1.44, 1.47, 1.33 ವಕ್ರೀಭವನ ಸೂಚ್ಯಂಕ ಹೊಂದಿರುವ ಸೀಮೆ ಎಣ್ಣೆ, ಟರ್ಪೆಂಟೈನ್ ಎಣ್ಣೆ ಮತ್ತು ನೀರುಇವುಗಳನ್ನು ನಿಮಗೆ ನೀಡಲಾಗಿದೆ. ಇವುಗಳಲ್ಲಿ ಯಾವುದರಲ್ಲಿ ಬೆಳಕು ಅತ್ಯಂತ ವೇಗವಾಗಿ ಚಲಿಸುತ್ತದೆ?

Question 31.
ಸೌರ ಸ್ಥಿರಾಂಕ ಎಂದರೇನು? ಇದರ ಮೌಲ್ಯವನ್ನು ತಿಳಿಸಿ.
ಅಥವಾ
ಸೌರಶಕ್ತಿಯು ಮಾಲಿನ್ಯದಿಂದ ಮುಕ್ತವೇ? ಏಕೆ?

Question 32.
ಮರುಬಳಕೆ ಮತ್ತು ಮರು ಚಕ್ರೀಕರಣ ವಿಧಾನಗಳಲ್ಲಿ ಯಾವುದು ಉತ್ತಮ? ಏಕೆ?
ಅಥವಾ
ಫೆಮಿಂಗನ ಬಲಗೈ ನಿಯಮವನ್ನು ತಿಳಿಸಿ. ಇದನ್ನು ಆಧರಿಸಿದ ಉಪಕರಣವನ್ನು ತಿಳಿಸಿ.

Question 33.
ಬಲಗೈ ಹೆಬ್ಬೆರಳು ನಿಯಮವನ್ನು ನಿರೂಪಿಸಿ ಅದರ ಅನ್ವಯವನ್ನು ತಿಳಿಸಿ.

Question 34.
ನಿಮ್ಮ ದರ್ಪಣದ F1 ಮತ್ತು 2F1 ಗಳ ನಡುವೆ ವಸ್ತುವನ್ನು ಇರಿಸಿದಾಗ ಉಂಟಾಗುವ ಪ್ರತಿಬಿಂಬವನ್ನು ರೇಖಾ ನಕ್ಷೆಯ ಮೂಲಕ ತೋರಿಸಿ,

V ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. [5 x 3 = 15]

Question 35.
X ಎಂಬ ಲೋಹವು XSO4 ಎಂಬ ಲವಣವನ್ನು ಉಂಟುಮಾಡುತ್ತದೆ. ಈ ಲವಣದ ಜಲೀಯ ದ್ರಾವಣವು ಸೋಡಿಯಂ ಹೈಡ್ರಾಕ್ಸಿಡಿನೊಂದಿಗೆ ವರ್ತಿಸಿ ನೀಲಿ ಒತ್ತರ – Y ಯನ್ನು ಉಂಟುಮಾಡುತ್ತದೆ. X ಲೋಹವು ಆಕ್ಸಿಜನ್‌ನೊಂದಿಗೆ ಹೆಚ್ಚಿನ ತಾಪಡಲ್ಲಿ ವರ್ತಿಸಿ ಕಪ್ಪು ಬಣ್ಣದ 2 ಸಂಯುಕ್ತವನ್ನು ಉಂಟು ಮಾಡುತ್ತದೆ. ಸಮೀಕರಣಗಳೊಂದಿಗೆ X, Y, Z ಗಳನ್ನು ಗುರುತಿಸಿ.

Question 36.
ಕೆಳಗಿನವುಗಳು ಏನನ್ನು ಸಾಗಾಣಿಕೆ ಮಾಡುತ್ತವೆ?
a) ಕೈಲಂ
b) ಪ್ಲೋಯಂ
c) ಪುಪ್ಪುಸಕ ಅಭಿಧಮನಿ
d) ಪುಪ್ಪುಸಕ ಅಪಧಮನಿ
e) ಅಯೋರ್ಟಾ
f) ನೀಚ ಅಭಿಧಮನಿ.
ಅಥವಾ
ಮೂತ್ರ ಉತ್ಪಾದನೆಯ ಮುಖ್ಯ ಹಂತಗಳನ್ನು ತಿಳಿಸಿ.

Question 37.
R1, R2, R3, ಗಳೆಂಬ 3 ರೋಧಕಗಳನ್ನು ಸಮಾಂತರವಾಗಿ ಅಮೀಟರ್ ಮತ್ತು ವೋಲ್ಟಾಮೀಟರ್‌ಗಳೊಂದಿಗೆ ಸಂಪರ್ಕ ಹೊಂದಿರುವ ವಿದ್ಯುನ್ಮಂಡಲಕ್ಕೆ ಸಂಪರ್ಕಿಸಲಾಗಿದೆ. ಚಿತ್ರ ಬರೆದು ವಿದ್ಯುತ್ ಪ್ರವಾಹದ ದಿಕ್ಕನ್ನು ಗುರುತಿಸಿ,

Question 38.
a) ಮಂಡಲರು ತಮ್ಮ ಪ್ರಯೋಗಗಳಿಗೆ ಬಟಾಣಿ ಸಸ್ಯಗಳನ್ನೇ ಆರಿಸಲು ಕಾರಣವೇನು?
b) ಮೆಂಡಲರು ಆರಿಸಿಕೊಂಡ ಯಾವುದಾದರೂ ಎರಡು ವಿಭಿನ್ನ ಲಕ್ಷಣಗಳ ಜೋಡಿಯನ್ನು ಹೆಸರಿಸಿ,
c) ದ್ವಿತಳೀಕರಣದಲ್ಲಿ F2 ಪೀಳಿಗೆಯ ವ್ಯಕ್ತರೂಪ ಅನುಪಾತವನ್ನು ತಿಳಿಸಿ.

Question 39.
ಪೀನ ಮಸೂರದ ಪ್ರಧಾನ ಸಂಗಮ F1 ನಲ್ಲಿ ವಸ್ತುವನ್ನು ಇಟ್ಟಾಗ ಉಂಟಾಗುವ ಪ್ರತಿಬಿಂಬವನ್ನು ರೇಖಾ ಚಿತ್ರದ ಸಹಾಯದಿಂದ ತೋರಿಸಿ, ಪ್ರತಿಬಿಂಬದ ಸ್ವಭಾವವನ್ನು ತಿಳಿಸಿ.

VI ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. [3 x 4 = 12]

Question 40.
ರಾಸಾಯನಿಕ ಗುಣಗಳ ಆಧಾರದಲ್ಲಿ ಲೋಹಗಳು ಮತ್ತು ಅಲೋಹಗಳ ನಡುವಣ 24 ವ್ಯತ್ಯಾಸಗಳನ್ನು ಪಟ್ಟಿಮಾಡಿ.

Question 41.
ಪರಾವರ್ತಿತ ಚಾಪದ ಚಿತ್ರ ಬರೆದು ಕೆಳಗಿನ ಭಾಗಗಳನ್ನು ಗುರುತಿಸಿ.
a) ಜ್ಞಾನೇಂದ್ರಿಯಗಳಿಂದ ಮಿದುಳು ಬಳ್ಳಿಗೆ ಮಾಹಿತಿ ರವಾನಿಸುವ ಭಾಗ
b) ಸಂಪರ್ಕ ಕಲ್ಪಿಸುವ ನ್ಯೂರಾನ್
c) ಕಾರ್ಯ ನಿರ್ವಾಹಕ
d) ಕ್ರಿಯಾವಾಹಿ ನರ

Question 42.
ದೂರದೃಷ್ಟಿಯಿಂದ ಬಳಲುತ್ತಿರುವ ವ್ಯಕ್ತಿಯ ಸಮೀಪ ದೃಷ್ಟಿ ಬಿಂದು 1 ಮೀಟರ್. ಈ ಸಮಸ್ಯೆಯನ್ನು ಪರಿಹರಿಸಲು ಯಾವ ಸಾಮರ್ಥ್ಯದ ಕನ್ನಡಕವನ್ನು ಬಳಸಬೇಕು? (ಸಾಮಾನ್ಯ ದೃಷ್ಟಿಯ ಸಮೀಪ ದೃಷ್ಟಿ ಬಿಂದು – 25cm) ಚಿತ್ರದ ಮೂಲಕ ಸಮಸ್ಯೆ ಮತ್ತು ಪರಿಹಾರವನ್ನು ವ್ಯಕ್ತಪಡಿಸಿ.

 

Answers

I
Answer 1:
B) ಹಸಿರು

Answer 2:
D) ಎಥನಾಲ್

Answer 3:
C) ನಾಸಿಕರಂದ್ರ → ಗಂಟಲು → ಶ್ವಾಸನಾಳ → ಶ್ವಾಸನಾಳದ ಕವಲು → ಆಲ್ವಿಯೋಲೈ

Answer 4:
D) ನ್ಯೂಸ್

Answer 5:
B) ಸೋಡಿಯಂ ಕ್ಲೋರೈಡ್

Answer 6:
C)ಅಲೋಹೀಯ ಗುಣ

Answer 7:
A) ಫೆಲೋಪಿಯನ್ ನಾಳ

Answer 8:
D) ದೊಡ್ಡದು

Answer 9:
C) ಪ್ರೆಸ್ ಬಯೋಪಿಯ

Answer 10:
A) CO

II
Answer 11:
Karnataka SSLC Science Model Question Paper 2 Kannada Medium ans 11

III
Answer 12:
ಹಲ್ಲುಗಳಲ್ಲಿ ಸೇರಿಕೊಂಡ ಬ್ಯಾಕ್ಟಿರಿಯಗಳು ಆಮೀಯ ವಸ್ತು ಸ್ರವಿಸಿ ಹಲ್ಲಿನ ಸವೆತಕ್ಕೆ ಕಾರಣವಾಗುತ್ತದೆ. ಅಮೀಯ ವಸ್ತುವನ್ನು ತಟಸ್ಥಗೊಳಿಸಲು ಪ್ರತ್ಯಾಮ್ಲಯ ಪೇಸ್ತನ್ನು ಬಳಸಬೇಕು.

Answer 13:
ಮುಟ್ಟಿದರೆ ಮುನಿ ಸಸ್ಯದ ಎಲೆಗಳನ್ನು ಮುಟ್ಟಿದಾಗ ಮುದುಡುತ್ತವೆ.

Answer 14:
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ

Answer 15:
ವಾಷಿಂಗ್ಸೋಡವು ಎಥನಾಲ್ನೊಂದಿಗೆ ವರ್ತಿಸುವುದಿಲ್ಲ. ಎಥನೋಯಿಕ್ ಆಮ್ಲದೊಂದಿಗೆ ವಾಷಿಂಗ್ ಸೋಡ ವರ್ತಿಸಿ CO2 ಅನಿಲವನ್ನು ಬಿಡುಗಡೆ ಮಾಡುತ್ತದೆ.

Answer 16:
ಸಣ್ಣ ಸಮೂಹದಲ್ಲಿನ ನೈಸರ್ಗಿಕ ಅವಘಡಗಳು ಕೆಲವು ವಂಶವಾಹಿಗಳ ಪುನರಾವರ್ತನೆಯನ್ನು ಬದಲಾಯಿಸಿ ಹೊಂದಾಣಿಕೆ ಇಲ್ಲದ ವೈವಿಧ್ಯತೆಯನ್ನು ಒದಗಿಸುವುದನ್ನೇ ಅನುವಂಶೀಯ ದಿಕ್ಕುತಿ ಎನ್ನುವರು.

Answer 17:
\(P = \frac {1}{f} = \frac {1}{-2} = -0.5D\)

Answer 18:
ಸೌರಕುಕ್ಕರ್‌ಗೆ ಬಿಳಿಯ ಬಣ್ಣ ಬಳಿಯುವುದರಿಂದ ಆಹಾರ ಬೇಗನೆ ಬೇಯದು, ಏಕೆಂದರೆ ಕಪ್ಪು ಬಣ್ಣಕ್ಕಿಂತ ಬಿಳಿ ಬಣ್ಣದ ಉಷ್ಣ ಹೀರುವಿಕೆ ಸಾಮರ್ಥ್ಯ ಕಡಿಮೆ.

IV
Answer 19.
ಸಾರಯುಕ್ತ H2SO4 ನಿರ್ಜಲಕಾರಕವಾಗಿ ಕೆಲಸ ಮಾಡುತ್ತದೆ.
ಕಾಸಿದಾಗ CHOH
Karnataka SSLC Science Model Question Paper 2 Kannada Medium ans 19
Answer 20:

  1. ಗಾಜು, ಕಾಗದ, ಸಾಬೂನು ಕೈಗಾರಿಕೆಗಳಲ್ಲಿ ಬಳಸುತ್ತಾರೆ.
  2. ಬೋರಾಕ್ಸ್ ಮತ್ತು ಸ್ವಚ್ಚಕಾರಕಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಅಥವಾ
ಶುಷ್ಕ ಸುಣ್ಣದೊಂದಿಗೆ ಕ್ಲೋರಿನ್‌ನ ಪ್ರತಿವರ್ತನೆಯಿಂದ ಭೀಚಿಂಗ್ ಪುಡಿಯನ್ನು ತಯಾರಿಸುತ್ತಾರೆ.
Ca(OH)2 + Cl → CaOCl2 + H2O

Answer 21:

  1. ಕ್ರಿಯಾಶೀಲತೆಯ ಸರಣಿಯಿಂದ ಲೋಹೋದ್ದರಣ ಮಾಡುವುದು ಸುಲಭವಾಗುತ್ತದೆ.
  2. ಕ್ರಿಯಾಶೀಲತೆಯ ಸರಣಿಯ ಜ್ಞಾನದಿಂದ ಹೆಚ್ಚು ಕ್ರಿಯಾಶೀಲಧಾತು ಕಡಿಮೆ ಕ್ರಿಯಾಶೀಲ ಧಾತುವನ್ನು ಸ್ಥಾನಪಲ್ಲಟಗೊಳಿಸುವ ರಾಸಾಯನಿಕ ಕ್ರಿಯೆಯ ಸಾಧ್ಯತೆಯನ್ನು ತಿಳಿಯಬಹುದು.

ಅಥವಾ
Au < Pb < Fe < Zn < Al < Mg < Ca < Na < K

Answer 22:
Karnataka SSLC Science Model Question Paper 2 Kannada Medium ans 22

Answer 23:
Karnataka SSLC Science Model Question Paper 2 Kannada Medium ans 23

Answer 24:

  1. ವಾಹಕದ ಉದ್ದ
  2. ವಾಹಕದ ಅಡ್ಡಕೊಯ್ತ
  3. ವಸ್ತುವಿನ ಪ್ರಾಕೃತಿಕ ಗುಣ
  4. ತಾಪ

ಅಥವಾ
ಕಾರಣ;

  1. ಮಿಶ್ರಲೋಹಗಳ ರೋಧಶೀಲತೆ ಲೋಹಗಳಿಗಿಂತ ಹೆಚ್ಚು
  2. ಲೋಹಗಳಿಗಿಂತ ಹೆಚ್ಚಿನ ಕರಗುವ ಬಿಂದು ಹೊಂದಿರುತ್ತವೆ.

Answer 25:

  1. ಜೈವಿಕ ಶಿಥಿಲೀಯವಲ್ಲದ ತ್ಯಾಜ್ಯಗಳು ಪರಿಸರದಲ್ಲಿ ದೀರ್ಘಕಾಲದವರೆಗೆ ಸಂಗ್ರಹಗೊಳ್ಳುತ್ತವೆ ಮತ್ತು ಪರಿಸರ ಮಾಲಿನ್ಯವನ್ನು ಉಂಟುಮಾಡುತ್ತದೆ.
  2. ಪರಿಸರ ವ್ಯವಸ್ಥೆಯನ್ನು ಹಾಳುಮಾಡುತ್ತವೆ.

Answer 26:
Karnataka SSLC Science Model Question Paper 2 Kannada Medium ans 26

Answer 27:

  1. 0 – 19 – 2, 8, 8, 1 – 4 ಕವಚಗಳನ್ನು ಹೊಂದಿದೆ.
  2. L – 10 = 2, 8, – ಅಷ್ಟಕ ವಿನ್ಯಾಸ ಹೊಂದಿರುವುದರಿಂದ ರಾಸಾಯನಿಕವಾಗಿ ಜಡವಾಗಿದೆ.

Answer 28:
A – ಪರಾಗ ನಳಿಕೆ; ಇದು ಗಂಡು ಲಿಂಗಾಣುಗಳು ಅಂಡಾಶಯಕ್ಕೆ ತಲುಪಲು ಸಹಾಯಕಾರಿ.
B – ಅಂಡಾಶಯ; ಇದು ಹೆಣ್ಣು ಲಿಂಗಾಣುಗಳನ್ನು ಉತ್ಪತ್ತಿ ಮಾಡುತ್ತದೆ.

Answer 29:
ಮಗುವಿನ ಲಿಂಗ ನಿರ್ಧಾರದಲ್ಲಿ ತಂದೆಯ ಪಾತ್ರವೇ ಪ್ರಮುಖವಾಗಿದೆ. ತಾಯಿಯಲ್ಲಿ XX ಕ್ರೋಮೋಸೋಮ್‌ಗಳಿದ್ದು ತಂದೆಯಲ್ಲಿ XY ಕ್ರೋಮೋಸೋಮ್‌ಗಳಿವೆ. ಗರ್ಭಧಾರಣೆಯ ಸಂದರ್ಭದಲ್ಲಿ ತಂದೆಯಿಂದ X ವರ್ಣ ತಂತು ಬಂದಲ್ಲಿ ಮಗು ಹೆಣ್ಣಾಗುತ್ತದೆ. Y ಕ್ರೋಮೋಸೋಮ್ ಬಂದಲ್ಲಿ ಮಗುಗಂಡಾಗುತ್ತದೆ.

Answer 30:
ದರ್ಪಣದಲ್ಲಿ ಉಂಟಾಗುವ ಪ್ರತಿಬಿಂಬದ ಸ್ವಭಾವದಿಂದ ದರ್ಪಣಗಳನ್ನು ಸುಲಭವಾಗಿ ಗುರುತಿಸಬಹುದು.

  1. ಪ್ರತಿಬಿಂಬದ ಗಾತ್ರವು ವಸ್ತುವಿನಷ್ಟೇ ಇದ್ದಲ್ಲಿ ಅದು ಸಮತಲ ದರ್ಪಣ
  2. ನೇರ ಮತ್ತು ಚಿಕ್ಕದಾದ ಪ್ರತಿಬಿಂಬ ಉಂಟಾದರೆ ಅದು ಪೀನ ದರ್ಪಣ.
  3. ತಲೆಕೆಳಗಾದ ಹಾಗೂ ವಿವಿಧ ಗಾತ್ರದ ಪ್ರತಿಬಿಂಬ ಉಂಟಾದರೆ ಹಾಗೂ ದರ್ಪಣದ ಸಮೀಪಕ್ಕೆ ಹೋದಂತೆ ನೇರ ಮತ್ತು ದೊಡ್ಡದಾದ ಪ್ರತಿಬಿಂಬ ಉಂಟಾದಲ್ಲಿ ಅದನ್ನು ನಿಮ್ಮ ದರ್ಪಣವೆಂದು ಗುರುತಿಸಬಹುದು.

ಅಥವಾ
ನೀರಿನ ವಕ್ರೀಭವನ ಸೂಚ್ಯಂಕ 1.33 ಅತ್ಯಂತ ಕಡಿಮೆ ಏಕೀಭವನ ಸೂಚ್ಯಂಕ ಹೊಂದಿದೆ. ಆದ್ದರಿಂದ ನೀರಿನ ಮಾಧ್ಯಮದಲ್ಲಿ ಬೆಳಕು ಅತ್ಯಂತ ವೇಗವಾಗಿ ಚಲಿಸುತ್ತದೆ.

Answer 31:
ಪ್ರತಿ ಏಕಮಾನ ಕ್ಷೇತ್ರ ಪಡೆಯುವ ಸೌರಶಕ್ತಿಗೆ ಸೌರಸ್ಥಿರಾಂಕ ಎನ್ನುವರು. ಸೌರಸ್ಟಿರಾಂಕದ ಬೆಲೆ – 1.4J/s/m2 ಅಥವಾ 1.4kW/m2
ಅಥವಾ
ಸೌರಶಕ್ತಿಯ ಆಕರವೂ ಮಾಲಿನ್ಯದಿಂದ ಮುಕ್ತವಲ್ಲ. ಏಕೆಂದರೆಸೌರಕೋಶದಲ್ಲಿ ಬಳಸುವ ಸಿಲಿಕಾನ್ ಸಂಸ್ಕರಣೆ ಮಾಲಿನ್ಯವನ್ನುಂಟು ಮಾಡಬಹುದು.

Answer 32:
ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮರುಬಳಕೆ ಅತ್ಯುತ್ತಮ. ಏಕೆಂದರೆ,

  1. ಶಕ್ತಿ ವ್ಯಯವಾಗುವುದಿಲ್ಲ.
  2. ಬಳಸಿದ ವಸ್ತುಗಳನ್ನು ಯಾವುದೇ ಸಂಸ್ಕರಣೆಗೆ ಒಳಪಡಿಸದೇ ಮತ್ತೆ ಮತ್ತೆ ಬಳಸಬಹುದು. ಉದಾ: ಪಾಲಿಥೀನ್ ಕೈ ಚೀಲ.

ಅಥವಾ

  1. ಬಲಗೈನ ಹೆಬ್ಬೆರಳು, ತೋರು ಬೆರಳು ಮತ್ತು ಮಧ್ಯದ ಬೆರಳುಗಳನ್ನು ಪರಸ್ಪರ ಲಂಬವಾಗಿರುವಂತೆ ಇರಿಸಿದಾಗ ತೋರುಬೆರಳು ಕಾಂತಕ್ಷೇತ್ರದ ನೇರವನ್ನು, ಹೆಬ್ಬೆರಳು ವಾಹಕದ ಚಲನೆಯ ನೇರವನ್ನು ಹಾಗೂ ಮಧ್ಯದ ಬೆರಳು ಪ್ರೇರಿತ ವಿದ್ಯುತ್ಪವಾಹದ ದಿಕ್ಕನ್ನು ಸೂಚಿಸುತ್ತದೆ.
  2. ವಿದ್ಯುತ್ ಮೋಟಾರು.

Answer 33:
ವಿದ್ಯುತ್ ಪ್ರವಹಿಸುತ್ತಿರುವ ನೇರವಾದ ವಾಹಕವನ್ನು ಬಲಗೈಯಲ್ಲಿ ಹಿಡಿದಾಗ ಹೆಬ್ಬೆರಳು ವಿದ್ಯುತ್ ಪ್ರವಾಹದ ದಿಕ್ಕನ್ನು ಸೂಚಿಸುತ್ತದೆ, ಕಾಂತಕ್ಷೇತ್ರದ ದಿಕ್ಕನ್ನು ಬೆರಳುಗಳು ಸೂಚಿಸುತ್ತವೆ.

Answer 34:
Karnataka SSLC Science Model Question Paper 2 Kannada Medium ans 34

Answer 35:
X – ತಾಮ್ರ
Y – Cu(OH)2
Karnataka SSLC Science Model Question Paper 2 Kannada Medium ans 35
Z – ತಾಮ್ರದ ಆಕ್ಸೆಡ್
2Cu + O2 + CuO ಕಪ್ಪು ಬಣ್ಣದ ತಾಮ್ರದ ಆಕ್ಸೆಡ್

Answer 36:
a) ಕೈಲಂ – ನೀರು, ಲವಣಗಳು
b) ಶ್ಲೋಯಂ – ಆಹಾರದಂತಹ ಸಾವಯವ ವಸ್ತುಗಳು
c) ಪುಪ್ಪುಸಕ ಅಭಿಧಮನಿ – ಆಕ್ಸಿಜನ್ ಸಹಿತ ರಕ್ತವನ್ನು ಶ್ವಾಸಕೋಶಗಳಿಂದ ಹೃದಯಕ್ಕೆ ತರುತ್ತದೆ.
d) ಪಪಸಕ ಅಪಧಮನಿ – ಆಕ್ಸಿಜನ್ ರಹಿತ ರಕ್ತವನ್ನು ಹೃದಯದಿಂದ ಶ್ವಾಸಕೋಶಗಳಿಗೆ ಸಾಗಿಸುತ್ತದೆ.
e) ಅಯೋರ್ಟಾ – ಹೃದಯದಿಂದ ಆಕ್ಸಿಜನ್ ಯುಕ್ತ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಒಯ್ಯುತ್ತದೆ.
f) ನೀಚ ಅಭಿಧಮನಿ – ದೇಹದ ಕೆಳಭಾಗದಿಂದ ಆಕ್ಸಿಜನ್ ರಹಿತ ರಕ್ತವನ್ನು ಹೃದಯಕ್ಕೆ ತರುತ್ತದೆ.
ಅಥವಾ
ನೆಫ್ರಾನ್ ಮೂತ್ರ ಉತ್ಪಾದಿಸುವ, ಮೂತ್ರ ಜನಕಾಂಗದ ಕಾರ್ಯಾತ್ಮಕ ಘಟಕವಾಗಿದೆ. ನೆಫ್ರಾನಿನ್ ಬೌಮನ್ನನ ಕೋಶದಲ್ಲಿ ರಕ್ತವು ಹೆಚ್ಚಿನ ಒತ್ತಡದಲ್ಲಿ ಸೋಸಲ್ಪಡುತ್ತದೆ. ಇದೇ ಗ್ಲಾಮೆರುಲಸ್‌ನ ಸೂಕ್ಷ ಸೋಸುವಿಕೆ, ನೆಫಾನ್ 3 ಹಂತಗಳಲ್ಲಿ ಮೂತ್ರ ಉತ್ಪಾದಿಸುತ್ತದೆ. ಸೋಸಲ್ಪಟ್ಟ ದ್ರವವು ನಿಕಟ ನಾಲಿಕೆ ನಾಳದ ಮೂಲಕ ಹೆಸ್ಲಿಯ ಕುಣಿಕೆಯತ್ತ ಚಲಿಸುವಾಗ ಗ್ಲುಕೋಸ್, ಅಮೈನೋ ಆಮ್ಲಗಳಂತಹ ಅವಶ್ಯಕ ವಸ್ತುಗಳು ಹೀರಲ್ಪಡುತ್ತವೆ ಈ ಹಂತಕ್ಕೆ ವ್ಯತ್ಯಸ್ಥ ಮರುಹೀರಿಕೆ ಎನ್ನುವರು. ಲೋಮನಾಳದಲ್ಲಿರುವ ಯೂರಿಯ ಮತ್ತು ತ್ಯಾಜ್ಯ ಮತ್ತು ದೂರದ ನಾಲಿಕೆ ನಾಳಕ್ಕೆ ಸ್ರವಿಸಲ್ಪಡುತ್ತದೆ. ಈ ಹಂತಕ್ಕೆ ನಳಿಕಾ ಸ್ರವಿಕೆ ಎನ್ನುವರು.
ಅಂತಿಮವಾಗಿ ಎಲ್ಲಾ ನೆಫ್ರಾನ್‌ಗಳಿಂದ ಸೋಸಲ್ಪಟ್ಟ ದ್ರವ ಮೂತ್ರಕೋಶಗಳಲ್ಲಿ ಸಂಗ್ರಹಗೊಳ್ಳುತ್ತದೆ.

Answer 37:
Karnataka SSLC Science Model Question Paper 2 Kannada Medium ans 37

Answer 38:
a) ಮೆಂಡಲರು ಬಟಾಣಿ ಸಸ್ಯ ಆಯ್ದುಕೊಳ್ಳಲು ಕಾರಣಗಳು

  1. ಸಂಕ್ಷಿಪ್ತ ಅವಧಿಯ ಜೀವನಚಕ್ರ
  2. ಸ್ವಕೀಯ ಮತ್ತು ಪರಕೀಯ ಪರಾಗಸ್ಪರ್ಶ ಮಾಡಬಹುದಾಗಿತ್ತು.

b) ಎರಡು ವಿಭಿನ್ನ ಲಕ್ಷಣಗಳು:

  1. ಗಿಡದ ಎತ್ತರ × ಗಿಡ್ಡ
  2. ಹೂವಿನ ಬಣ್ಣ = ನೇರಳೆ × ಬಿಳಿ
  3. ಬೀಜದ ಬಣ್ಣ = ಹಳದಿ × ಹಸಿರು

c) Fತಳಿ ಪೀಳಿಗೆಯ ವ್ಯಕ್ತ ಅನುಪಾತ 9 : 3 : 3 : 1

Answer 39:
ನಿಮ್ಮ ದರ್ಪಣ
Karnataka SSLC Science Model Question Paper 2 Kannada Medium ans 39

VI
Answer 40:
ಲೋಹಗಳು ಆಕ್ಸಿಜನ್‌ನೊಂದಿಗೆ ವರ್ತಿಸಿ, ಪ್ರತ್ಯಾಮ್ಲಯ ಆನ್ಲೈಡ್‌ಗಳನ್ನು ಉಂಟುಮಾಡುತ್ತದೆ.
4Na + 2O2 → 2Na2O
ಅಲೋಹಗಳು ಆಕ್ಸಿಜನ್‌ನೊಂದಿಗೆ ವರ್ತಿಸಿ ಆಮೀಯ ಆನ್ಲೈಡ್‌ಗಳನ್ನು ಉಂಟುಮಾಡುತ್ತವೆ.
S + O2 → SO2
ಲೋಹಗಳು ಸಾರರಿಕ್ತ ಆಮ್ಲಗಳೊಂದಿಗೆ ವರ್ತಿಸಿ ಹೈಡೋಜನ್ ಅನಿಲವನ್ನು ಬಿಡುಗಡೆ ಮಾಡುತ್ತವೆ.
Zn+ 2HCl → ZnCl2 + H2
ಅಲೋಹಗಳು ಸಾರರಿಕ್ ಆಮ್ಲಗಳೊಂದಿಗೆ ವರ್ತಿಸಿ ಹೈಡೋಜನ್ ಅನಿಲವನ್ನು ಬಿಡುಗಡೆ ಮಾಡುವುದಿಲ್ಲ.

Answer 41:
Karnataka SSLC Science Model Question Paper 2 Kannada Medium ans 41

Answer 42:
ಪೀನ ಮಸೂರವನ್ನು ಬಳಸಿ ಸಮಸ್ಯೆಯನ್ನು ಸರಿಪಡಿಸಬಹುದು.
v = 1, m = 100cm; u = -25cm
Karnataka SSLC Science Model Question Paper 2 Kannada Medium ans 42

We hope the given Karnataka SSLC Science Model Question Paper 2 Kannada Medium will help you. If you have any query regarding Karnataka SSLC Science Model Question Paper 2 Kannada Medium, drop a comment below and we will get back to you at the earliest.